ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ತಳಿಯನ್ನ ಸದಾಶಿವನಗರದ ಸ್ಯಾಂಕಿ ಕೆರೆ ಮುಖ್ಯ ದ್ವಾರದ ಮುಂಭಾಗ ಅದ್ದೂರಿಯಾಗಿ ಅನಾವರಣವಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತ ಮಾಜಿ ಉಪ ಮುಖ್ಯಮಂತ್ರಿ ಆದ ಡಾಕ್ಟರ್ ಸಿ ಎನ್ ಅಶ್ವಥ್ ನಾರಾಯಣ್ ರವರು ಕರವೇ ರಾಜ್ಯ ಅಧ್ಯಕ್ಷರಾದ ಶಿವರಾಮೇಗೌಡರು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮತ್ತು ಅಪಾರವಾದ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಸೇರಿ ಗೌರವ ನಮನ ಸಲ್ಲಿಸಿದರು
